Monday, June 21, 2010

ನೆನಪು(1)

ಮೊದಲು ಇಟ್ಟ ಹೆಜ್ಜೆಯ ನೆನಪು 
ಅಮ್ಮನನ್ನು ಕಾಣದೇ ಕಂಗಾಲಾದ ನೆನಪು 
ಅಕ್ಕನು ತೋರಿದ ಪ್ರೀತಿಯ ನೆನಪು 

ಶಾಲೆಯಲ್ಲಿ ತಿಂದ ಏಟಿನ ನೆನಪು 
ಬಿದ್ದು ಪೆಟ್ಟಾದ ನೋವಿನ ನೆನಪು 
ಸೈಕಲ್ ಕಲಿತ ಸಂತಸದ ನೆನಪು 

ತುಂಬಿದ ಮನೆಯ ನಲಿವಿನ ನೆನಪು 
ಮಾಡಿದ ರುದ್ರಾಭಿಷೇಕದ ನೆನಪು 
ಬ್ರಹ್ಮೋಪದೇಶದ ಗಳಿಗೆಯ ನೆನಪು 

ಮೊದಲ ಭಾಷಣದ ಹೆದರಿಕೆಯ ನೆನಪು 
ಬೆಟ್ಟದ ಹಣ್ಣುಗಳ ರುಚಿಯ ನೆನಪು 
ಅತ್ಯುತ್ತಮ ವಿಧ್ಯಾರ್ಥಿಯದ ಹೆಮ್ಮೆಯ ನೆನಪು 

ಬಹುಬಾರಿ ಡಿಕ್ಕಿ ಹೊಡೆದ ಗೆಳತಿಯ ನೆನಪು 
ಶಾಲೆಯ ಬೀಳ್ಕೊಡುಗೆಯ ಐಸ್ಕ್ರೀಂ ನೆನಪು 
ಫೋಟೋಗಾಗಿ ತಯಾರಾದ ಸಂಭ್ರಮದ ನೆನಪು 

ದೋಸೆಗಾಗಿ ಮನೆಗೆ ಓಡುತ್ತಿದ್ದ ನೆನಪು 
ಮಳೆಗಾಲದ ಹೊಳೆಯ ಪ್ರವಾಹದ ನೆನಪು 
ಸುಟ್ಟು ತಿಂದ ಗೋಡಂಬಿಯ ನೆನಪು 

ಗುಂಪುಕೂಡಿ ತೆಗೆದ ಜೇನಿನ ನೆನಪು 
ಗೆಳೆಯ ಸಾಕಿದ ಗಿಳಿಯ ನೆನಪು 
ಮುಂಜಾನೆ  ಆಲೆಮನೆಯ ಮೋಜಿನ ನೆನಪು 

ಕಾಲೇಜ್ಗಾಗಿ ತೊರೆದ ಊರಿನ ನೆನಪು 
ದೂರವಾದ  ಗೆಳೆಯರ ಒಡನಾಟದ ನೆನಪು 
ಹೊರಟಾಗ ಇಟ್ಟ ಕಣ್ಣೀರ ನೆನಪು 

ನೆನಪು ನೆನಪು ನೆನಪು 
ಮೊದಲ ಪರ್ವದ ಸುಂದರ ನೆನಪು 
ಮುದ ನೀಡುವ  ಬಾಲ್ಯದ ನೆನಪು 

Thursday, June 3, 2010

ಒಂಟಿ


ಬಯಸಿದ ಸ್ನೇಹ 
ಬೆಳೆದ ವ್ಯಾಮೋಹ 
ಸಿಕ್ಕಿದ ದ್ರೋಹ 
ಆದೆ ನಾ ಒಂಟಿ 


ಹುಡುಕಿದ ಸಂಗಾತಿ 
ಹಂಬಲಿಸಿದ ಪ್ರೀತಿ
ದೊರಕಿದ ನೀತಿ 
ಆದೆ ನಾ ಒಂಟಿ

ಜೀವದ ಗೆಳೆಯ 
ಕಳೆದ ಸಮಯ 
ಹೇಳಿದ ವಿದಾಯ
ಆದೆ ನಾ ಒಂಟಿ  

ಜೊತೆಗಿದ್ದ ನಂಟರು 
ಸುಖವಿದ್ದಾಗ ಪ್ರಥಮರು 
ಕಷ್ಟದಲ್ಲಿ ನೋಡರು 
ಆದೆನು ನಾ ಒಂಟಿ 

ಬಂದಾಗ ಒಂಟಿ 
ಬೆಳೆಯುವಾಗಲೂ ಒಂಟಿ 
ಹೋಗುವಾಗಲೂ ಒಂಟಿ
ಯಾರಿಂದಲೂ ಬಯಸದಿರು ಏನನ್ನು 
ಕೊಡು ಎಂದಿಗೂ ನಿನ್ನ ಸಹಕಾರವನ್ನು 
ಮರೆಯದಿರು ತಂದೆ ತಾಯಿಯನ್ನು 
ಅವರು ಮಾಡರು ನಿನ್ನ ಒಂಟಿಯನ್ನು

Saturday, April 24, 2010

ಎರಡನೇ ಮನೆ


ಅದು ಅಪರಿಚಿತವೆನಿಸಿದ್ದ ಜಾಗ 
ಎಲ್ಲರೂ ಅಪರಿಚಿತರು 
ಮನೆಗೆ ಓಡಿ ಹೋಗುವಷ್ಟು ಬೇಸರ 

ಮೊದಲು ಪರಿಚಯವಾದ ಕ್ಲಾಸ್ ಮೇಟ್ಸ 
ಆಗ ಮುಖದಲ್ಲಿ ಸ್ವಲ್ಪ ನಗು 
ಸಿಕ್ಕರಲ್ಲ ಗೆಳೆಯರು ಎನ್ನುವ ಆನಂದ 

ನಗುವಿನಿಂದ ಪ್ರಾರಂಭಗೊಂಡ ಗೆಳೆತನ 
ಒಂದೇ ಊರಿನವರೆಲ್ಲರ ಪರಿಚಯ 
ನಮ್ಮವರು ಎಂಬ ಭದ್ರತಾ ಭಾವ 

ಆಡಿದ ಕ್ರಿಕೆಟ್ ಟೂರ್ನಿ  
ಹುಚ್ಚು ಹಿಡಸಿದ ಪಾಮ್ ಟೆನ್ನಿಸ್ 
ಹರಟಿದ ವಿಚಿತ್ರ ವಿಷಯಗಳು 

ಕೂಡಿ ಓದಿದ ದಿನಗಳು 
ಗುಂಪಿನಲ್ಲಿ ನೋಡಿದ ಮ್ಯಾಚ್ಗಳು
ಜಾಗರಣೆಯ ಸವಿ ಕ್ಷಣಗಳು 

ಸ್ನಾನಕ್ಕೆ ಸಾಲಲ್ಲಿ ನಿಲ್ಲುವ ಕೆಲವರು 
ಸ್ನಾನವೇ ಮಾಡದ ಕೆಲವರು 
ಎಲ್ಲ ವಿಧದ ನಮ್ಮ ಗೆಳೆಯರು 

ಮೊದಲು ಹಿಡಿಸಿದ್ದ  ಊಟ
ಈಗ ವಾಂತಿಬರಿಸುತ್ತದೆ ಪರಿಮಳ ಕೂಡ 
ಹೋಟೆಲ್ ಅರಸಿರುವೆವು ನಾವುಗಳು 

ನೋಡಿದ ಬಗೆಬಗೆಯ ಸಿನಿಮಾಗಳು 
ಹಾಡಿದ ಅನ್ಯಭಾಷಾ ಹಾಡುಗಳು 
ಅರ್ಥ ಗೊತ್ತಿಲ್ಲದಿದ್ದರೂ ಸಂತಸ ನೀಡಿದ ಸಾಹಿತ್ಯ 

ಆಚರಿಸಿದ ವಿವಿಧ ಹಬ್ಬಗಳು,ದಿನಗಳು 
ಕೊಟ್ಟ ಬಗೆಬಗೆಯ ಪೋಸುಗಳು 
ಮುದ ನೀಡುವ ಗುಂಪಿನ ಫೋಟೋಗಳು 

ಈಗ ಎಲ್ಲರೂ ಬಂಧು-ಮಿತ್ರರು 
ಬೆಳೆದಿದೆ ನಮ್ಮ ಸಂಸಾರ 
ಇದು ನಮ್ಮ ಎರಡನೇ ಮನೆ ,ಹಾಸ್ಟೆಲ್ 

ಬಿಟ್ಟು ಹೋಗಲು ಮನಸಿಲ್ಲ 
ಆದರೆ ಬೇರೆ ದಾರಿಯಿಲ್ಲ 
ಮುಂದೆಂದೂ ಇಂಥ ಜೀವನ ಸಿಗುವುದಿಲ್ಲ 

ಹುಟ್ಟು ಎಲ್ಲಾದರೂ ಬೆಳೆ ಎಲ್ಲಾದರೂ 
ಒಮ್ಮೆ ಹಾಸ್ಟೆಲ್ ಜೀವನವ ಅನುಭವಿಸಲು ಮರೆಯದಿರು 
ಇದು ಸಂತೋಷದ ಸಾಗರ  

Thursday, April 22, 2010

ಹಕ್ಕಿಗಳು??


ಅಲ್ಲೊಂದು ಪುಟ್ಟ ಗೂಡು 
ಅದರಲ್ಲೊಂದು ಸಂಸಾರ 
ಮುದ ನೀಡುತ್ತಿತ್ತು ಅವರ ಚಿಲಿಪಿಲಿ ನಾದ 

ತಂದೆತಾಯಿ ಹೋಗುತ್ತಿದ್ದವು ಊಟ ತರಲು 
ಮನೆಯಲ್ಲಿ ಆಡುತ್ತಿದ್ದವು ಮಕ್ಕಳು 
ಯಾರ ತಂಟೆಗೂ ಹೋಗುತ್ತಿರಲಿಲ್ಲ ಅವು 

ಸಂಜೆಯಾದೊಡನೆ ಮನೆ ಸೇರುತ್ತಿದ್ದವು 
ಮಕ್ಕಳಿಗೆ ಊಟ ತಿನಿಸಿ ಮಲಗುತ್ತಿದ್ದ ತಾಯಿ 
ಅವರ ಕಾಯುವ ತಂದೆ 

ಬೆಳವಣಿಗೆಯ ಹೆಸರಲ್ಲಿ ನಾಶವಾದವು ಕಾಡುಗಳು 
ಮುಗಿಲು ಮುಟ್ಟಿದವು ಕಟ್ಟಡಗಳು 
ಎದ್ದು ನಿಂತವು ದೂರವಾಣಿ ಗೋಪುರಗಳು 

ಅಳಿದವು ಹಲವು ಜೀವ ಸಂಕುಲಗಳು
ಕಂಗಾಲಾಯಿತು ಆ ಪುಟ್ಟ ಸಂಸಾರ
ಸಿಗದಾಯಿತು  ಬದುಕಲು ಜಾಗ 

ಈಗ ಕಾಣದಾಗಿವೆ ಹಕ್ಕಿಗಳು 
ಉಳಿಸಬೇಕಾಗಿದೆ ಇರುವ ಸಂತತಿಗಳ 
ಅದಕ್ಕಾಗಿ ಕೈ ಜೋಡಿಸಬೇಕಾಗಿದೆ ನಾವುಗಳು

Sunday, April 18, 2010

ಎರಡನೇ ಪ್ರೀತಿ


ನೋಡಿದೆ ಪಿಯುಸಿಯಲ್ಲಿ ಅವಳನ್ನು 
ಮಾತನಾಡಲು ಬಿಡಲಿಲ್ಲ ಭಯ ನನ್ನನ್ನು 
ನೋಡಿಯೇ ಕಳೆದೆ ಎರಡು ವರ್ಷವನ್ನು 

ಎಣಿಸಿರಲಿಲ್ಲ ಮತ್ತೆ ಸಿಗುತ್ತಾಳೆ  ಎಂಬುದನ್ನು
ಅದ್ರಷ್ಟವು ಮಾಡಿಸಿತು ಪರಿಚಯವನ್ನು 
ಆದರೆ ನಾಚಿಕೆ ಆಡಿಸಿತು ಅವಳ ಜೊತೆ ತೊದಲು ಮಾತನ್ನು 

ಎಲ್ಲಿಂದಲೋ ಬಂದ ಧೈರ್ಯ ಕೇಳಿತು ಪ್ರೀತಿಸುವೆಯ ಎಂದವಳನ್ನು 
ಇದು ಸಮಯವಲ್ಲ ಎಂದು ಚಿವುಟಿದಳು ಪ್ರೀತಿಯ ಅಂಕುರವನ್ನು
ನೆನಪಿಸಿಕೊಂಡು ಆಗ ನನ್ನ ಮೊದಲ ಪ್ರೀತಿಯನ್ನು 

ಆದರು ಬಯಸಿದೆ ಸ್ನೇಹ ಸಂಬಂಧವನ್ನು 
ಅವಳ ದ್ವಂದ್ವ ನಡತೆ ಬದಲಿಸಿತು ನನ್ನ ಮನಸನ್ನು 
ಕಾದೆನು ಅದನ್ನು ಉಳಿಸಿಕೊಲ್ಲುತ್ತಾಳೆ ಎಂಬುದನ್ನು 

ಸ್ನೇಹವೂ ಬೇಡವೆಂದು ತ್ಯಜಿಸಿದಳು ನನ್ನನ್ನು 
ಇಗ ನಂಬಿದ್ದೇನೆ ತಂದೆ ತಾಯಿಯನ್ನು 
ಏಕೆಂದರೆ ಅವರು ಕೊಡಿಸುತ್ತಾರೆ ಚಂದದ ಗೊಂಬೆಯನ್ನು