ಮೊದಲು ಇಟ್ಟ ಪುಟ್ಟ ಹೆಜ್ಜೆಯಿಂದ
ಮೊದಲ ತೊದಲ ಮಾತಿನಿಂದ
ಪ್ರಾರಂಭಗೊಂಡ ಆ ನನ್ನ ಬಾಲ್ಯ
ಗುರಿಯಿರದ ನೆನಪಿರದ ಕನಸುಗಳಿಂದ
ಆಸೆ ದ್ವೇಷವಿರದ ಮುಗ್ಧ ಮನಸಿನಿಂದ
ಮಧುರ ಮಾತುಗಳಿಂದ ಕೂಡಿತ್ತು ನನ್ನ ಬಾಲ್ಯ
ಅಮ್ಮನ ಪ್ರೀತಿಯ ಪೆಟ್ಟಿನಿಂದ
ಗುರುವಿನ ಬುದ್ಧಿಯ ಮಾತುಗಳಿಂದ
ನೆರೆಹೊರೆಯವರ ಮಮತೆಯಿಂದೈತ್ತು ಆ ನನ್ನ ಬಾಲ್ಯ
ಆಡಿದ ಬಗೆ ಬಗೆಯ ಆಟಗಳ
ಓದಿದ ವಿವಿಧ ಪಾಠಗಳ
ಪಡೆದ ಪ್ರಾಥಮಿಕ ಶಿಕ್ಷಣದ ಆ ನನ್ನ ಬಾಲ್ಯ
ಅರಿಯದೇ ಗಾಢವಾಗಿದ್ದ ಗೆಳೆತನ
ಹುಡುಗಿಯರ ನೋಡಿ ಓಡಿ ಹೋಗುವ ನಾಚಿಕೆತನ
ಆದರೂ ಕೂಡಿ ಮಾಡಿದ ನಾಟಕ,ಆ ನನ್ನ ಬಾಲ್ಯ
ಅರಿಷಡ್ವರ್ಗಗಳ ಬಲಿಯಾದ
ಕಷ್ಟ ಕಾರ್ಪಣ್ಯಗಳಿಂದ ತುಂಬಿದ ಜೀವನ
ಹೇಳುತಿದೆ ಕಳೆದುಹೋಯಿತು ಆ ನಿನ್ನ ಬಾಲ್ಯ
No comments:
Post a Comment