Wednesday, March 31, 2010

ನನ್ನ ಬಾಲ್ಯ



ಮೊದಲು ಇಟ್ಟ ಪುಟ್ಟ ಹೆಜ್ಜೆಯಿಂದ  
ಮೊದಲ ತೊದಲ ಮಾತಿನಿಂದ 
ಪ್ರಾರಂಭಗೊಂಡ ಆ ನನ್ನ ಬಾಲ್ಯ 

ಗುರಿಯಿರದ ನೆನಪಿರದ ಕನಸುಗಳಿಂದ 
ಆಸೆ ದ್ವೇಷವಿರದ ಮುಗ್ಧ ಮನಸಿನಿಂದ 
ಮಧುರ ಮಾತುಗಳಿಂದ ಕೂಡಿತ್ತು ನನ್ನ ಬಾಲ್ಯ

ಅಮ್ಮನ ಪ್ರೀತಿಯ ಪೆಟ್ಟಿನಿಂದ 
ಗುರುವಿನ ಬುದ್ಧಿಯ ಮಾತುಗಳಿಂದ
ನೆರೆಹೊರೆಯವರ ಮಮತೆಯಿಂದೈತ್ತು ಆ ನನ್ನ ಬಾಲ್ಯ  

ಆಡಿದ ಬಗೆ ಬಗೆಯ ಆಟಗಳ 
ಓದಿದ ವಿವಿಧ ಪಾಠಗಳ 
ಪಡೆದ ಪ್ರಾಥಮಿಕ ಶಿಕ್ಷಣದ ಆ ನನ್ನ ಬಾಲ್ಯ 

ಅರಿಯದೇ ಗಾಢವಾಗಿದ್ದ ಗೆಳೆತನ 
ಹುಡುಗಿಯರ ನೋಡಿ ಓಡಿ ಹೋಗುವ ನಾಚಿಕೆತನ 
ಆದರೂ ಕೂಡಿ ಮಾಡಿದ ನಾಟಕ,ಆ ನನ್ನ ಬಾಲ್ಯ 

ಅರಿಷಡ್ವರ್ಗಗಳ ಬಲಿಯಾದ 
ಕಷ್ಟ ಕಾರ್ಪಣ್ಯಗಳಿಂದ ತುಂಬಿದ ಜೀವನ 
ಹೇಳುತಿದೆ ಕಳೆದುಹೋಯಿತು ಆ ನಿನ್ನ ಬಾಲ್ಯ

Monday, March 29, 2010

ಗುರುವಾದ ಗೆಳೆಯ


ತಿಳಿದಿದ್ದೆ ಅವನು ಹುಡುಗಿಯರ ಬಾಲ ಎಂದು 
ಮಾತನಾಡಿರಲಿಲ್ಲ ಅವನ ಜೊತೆ ಹಿಂದೆಂದೂ 
ಮುಳುಗಿರುತ್ತಿದ ಹುಡುಗಿಯರ ಗುಂಪಿನಲ್ಲಿ ಎಂದೆಂದೂ 

ಮೊದಲ ಮಾತು ಆಡಿದೆ ಪ್ರಯೋಗಾಲಯದಲ್ಲಿ 
ತಿಳಿಯದೇ ಬಿದ್ದೆ ಅವನ ಜೊತೆ ಗೆಳೆತನದಲ್ಲಿ 
ಕಳೆದೆವು ಸಂತಸದ ಕ್ಷಣವನ್ನು ಜೊತೆಯಲ್ಲಿ 

ತಿಳಿದೆ ಅವನ ಪ್ರೇಮ ದುರಂತವನ್ನು 
ಪ್ರೇರೇಪಿಸಿತು ಅವನ ಅನುಭವದ ಮಾತು ನನ್ನನ್ನು 
ಹೊರಟೆ ಹುಡುಕುತ ನನ್ನ ಕನಸಿನ ನಲ್ಲೆಯನ್ನು 

ಹೀಗಿರುವಾಗ ಸಿಕ್ಕಳು ಒಬ್ಬಳು ಹುಡುಗಿ 
ಮುಗ್ಧತೆ ಹೇಳಿತು ಅವಳೇ ನನ್ನ ಬೆಡಗಿ 
ಪಡೆದೆ ಗೆಳೆಯನ ಸಹಾಯವನ್ನು ಅವಳಿಗಾಗಿ 

ದುರದ್ರಷ್ಟವೋ ಏನೋ ಕೊಟ್ಟಳು ಕೈಯ ಸಮಯ ನೋಡಿ 
ಹೇಳಿದ ಗೆಳೆಯ ಬಿಚ್ಚಿತು ನಿನ್ನ  ಕೈಯ ಬೇಡಿ
ಈಗಲೂ ನಗುತ್ತೇವೆ ನಮ್ಮಿಬ್ಬರ ಪರಿಸ್ಥಿತಿಯ ನೋಡಿ