ಅದು ಅಪರಿಚಿತವೆನಿಸಿದ್ದ ಜಾಗ
ಎಲ್ಲರೂ ಅಪರಿಚಿತರು
ಮನೆಗೆ ಓಡಿ ಹೋಗುವಷ್ಟು ಬೇಸರ
ಮೊದಲು ಪರಿಚಯವಾದ ಕ್ಲಾಸ್ ಮೇಟ್ಸ
ಆಗ ಮುಖದಲ್ಲಿ ಸ್ವಲ್ಪ ನಗು
ಸಿಕ್ಕರಲ್ಲ ಗೆಳೆಯರು ಎನ್ನುವ ಆನಂದ
ನಗುವಿನಿಂದ ಪ್ರಾರಂಭಗೊಂಡ ಗೆಳೆತನ
ಒಂದೇ ಊರಿನವರೆಲ್ಲರ ಪರಿಚಯ
ನಮ್ಮವರು ಎಂಬ ಭದ್ರತಾ ಭಾವ
ಆಡಿದ ಕ್ರಿಕೆಟ್ ಟೂರ್ನಿ
ಹುಚ್ಚು ಹಿಡಸಿದ ಪಾಮ್ ಟೆನ್ನಿಸ್
ಹರಟಿದ ವಿಚಿತ್ರ ವಿಷಯಗಳು
ಕೂಡಿ ಓದಿದ ದಿನಗಳು
ಗುಂಪಿನಲ್ಲಿ ನೋಡಿದ ಮ್ಯಾಚ್ಗಳು
ಜಾಗರಣೆಯ ಸವಿ ಕ್ಷಣಗಳು
ಸ್ನಾನಕ್ಕೆ ಸಾಲಲ್ಲಿ ನಿಲ್ಲುವ ಕೆಲವರು
ಸ್ನಾನವೇ ಮಾಡದ ಕೆಲವರು
ಎಲ್ಲ ವಿಧದ ನಮ್ಮ ಗೆಳೆಯರು
ಮೊದಲು ಹಿಡಿಸಿದ್ದ ಊಟ
ಈಗ ವಾಂತಿಬರಿಸುತ್ತದೆ ಪರಿಮಳ ಕೂಡ
ಹೋಟೆಲ್ ಅರಸಿರುವೆವು ನಾವುಗಳು
ನೋಡಿದ ಬಗೆಬಗೆಯ ಸಿನಿಮಾಗಳು
ಹಾಡಿದ ಅನ್ಯಭಾಷಾ ಹಾಡುಗಳು
ಅರ್ಥ ಗೊತ್ತಿಲ್ಲದಿದ್ದರೂ ಸಂತಸ ನೀಡಿದ ಸಾಹಿತ್ಯ
ಆಚರಿಸಿದ ವಿವಿಧ ಹಬ್ಬಗಳು,ದಿನಗಳು
ಕೊಟ್ಟ ಬಗೆಬಗೆಯ ಪೋಸುಗಳು
ಮುದ ನೀಡುವ ಗುಂಪಿನ ಫೋಟೋಗಳು
ಈಗ ಎಲ್ಲರೂ ಬಂಧು-ಮಿತ್ರರು
ಬೆಳೆದಿದೆ ನಮ್ಮ ಸಂಸಾರ
ಇದು ನಮ್ಮ ಎರಡನೇ ಮನೆ ,ಹಾಸ್ಟೆಲ್
ಬಿಟ್ಟು ಹೋಗಲು ಮನಸಿಲ್ಲ
ಆದರೆ ಬೇರೆ ದಾರಿಯಿಲ್ಲ
ಮುಂದೆಂದೂ ಇಂಥ ಜೀವನ ಸಿಗುವುದಿಲ್ಲ
ಹುಟ್ಟು ಎಲ್ಲಾದರೂ ಬೆಳೆ ಎಲ್ಲಾದರೂ
ಒಮ್ಮೆ ಹಾಸ್ಟೆಲ್ ಜೀವನವ ಅನುಭವಿಸಲು ಮರೆಯದಿರು
ಇದು ಸಂತೋಷದ ಸಾಗರ