Tuesday, January 22, 2013

ನೀನೊಂದು ಮಾಯೆ


ನಾ ಕಂಡ ಕನಸಲ್ಲಿ ನೀನೊಂದು ಮಾಯೆ
ಮನದ ಆಗಸದಲ್ಲಿ ನಿನ್ನಯ ಛಾಯೆ


ನೀ ಬಂದು ನಿಲ್ಲಲು
ಮನವು ತಿಳಿಯ ಆಗಸದಂತೆ
ನೀ ಮನದುಂಬಿ ನಗಲು
ಪೂರ್ಣಚಂದ್ರ ಉದಯಿಸಿದಂತೆ


ನೀ ಮುನಿಸಿಕೊಳ್ಳಲು
ಕರಿ ಮೋಡಗಳು ಕವಿದಂತೆ
ನೀ ಕಣ್ಣೇರಿಡಲು
ಭೋರ್ಗರೆವ ಮಳೆ ಸುರಿದಂತೆ


ನೀ ಬಾಳ ಸಂಗಾತಿಯಾಗಲು
ಸರ್ವ ಋತು ಸಂಪನ್ನವಾದಂತೆ







No comments:

Post a Comment