Sunday, March 10, 2013

ಕವಿತೆಗಳು


ಕಿತ್ತ ಹೂವಿನ ಗಂಧ
ಬಾಡುವ ತನಕ
ಮುರಿದ ಮನಸಿನ ನೋವು
ಸಾಯುವ ತನಕ
-------------------------

ಕನಸುಗಳ ಸಾಲು
ಬಾಗಿಲಲಿ ನಿಂತಿತ್ತು
ನೀ ತೊರೆದು ಹೋದಾಗ
ಚೂರು ಚೂರಾಗಿತ್ತು
------------------------

ಮುಡಿಗೆರಿಸಿದ ಹೂವ
ಬಾಡಲು ಬಿಡೆನು
ಕೆಂದುಟಿಯ ನಗುವ
ಮಾಸಲು ಬಿಡೆನು

ನೀನಿಡುವ ಹೆಜ್ಜೆಯ
ಗಮನಿಸುವೆ ನಾನು 
ಮುಳ್ಳಿರಲು ದಾರಿಯಲಿ
ಹಾಸಿಗೆಯು ನಾನಾಗುವೆನು


ನನ್ನ ಜೀವನದ
ಕನ್ನಡಿಯು ನೀನು
ನೀ ಬೀಳಲು
ನಾ ಚೂರಾಗುವೆನು
----------------------------
ನೀ ಬಂದು ನಿಲ್ಲಲು 
ಎದೆಯಲ್ಲಿ ರಂಗೋಲಿ 
ನೀ ಮಾತಾಡಲು 
ತೂಗುತಿದೆ ಜೋಕಾಲಿ

ನೀ ಜೊತೆಗಿರಲು ಜೀವನ
ರಂಗು ರಂಗಿನ ಹೋಳಿ 
ನಗುವಿನ ಸಹಿ ನೀಡು
ಕಟ್ಟುವೆನು ತಾಳಿ !!

No comments:

Post a Comment