Friday, April 19, 2013

ಕವಿತೆಗಳು ಭಾಗ 2

ಕರೆಯದೇ ಬರುವ ನಿನ್ನ
ಕರೆಯದೇ ಹೋದೆ ನಾನು
ಕರೆದರೂ ಕೆಳದಂತಿದ್ದವಳ
ಕರೆ ಕರೆದು ಸೋತು ಹೋದೆ ನಾನು

---------------------------------------

ಮದುವೆ ಮದುವೆ ಮದುವೆ
ತಂದೆ ತಾಯಿಗಳಿಗೆ ಇದೊಂದು ಜವಾಬ್ದಾರಿ
ಹುಡುಗ ಹುದುಗಿಯರಿಗಿದು ಜೀವನದ ಸುಪಾರಿ
ಪ್ರೀತಿಯ ಹಂಚಿಕೆಯಿರಲು ಜೀವನ ಸುಂದರ
ಇಲ್ಲದಿರೆ ಬಾಳ ಬರಗಾಲ ಭೀಕರ

-----------------------------------------
ಹಲವರಿಗೆ ಕಾಲೇಜ್
ಕಲಿಯುವ ಜಾಗ
ಕೆಲವರಿಗೆ ಅದು ಪಕ್ಷಿಧಾಮ

------------------------------------------
ಕಮಲದ ಕಣ್ಣಲ್ಲಿ
ನನ್ನಯ ಬಿಂಬ
ಪ್ರೇಮದ ಹ್ರದಯದಲಿ
ನಿನ್ನ ಪ್ರತಿಬಿಂಬ

------------------------------------------
ಎದುರಿರಲು ನೀನು
ಎಲ್ಲ ಮರೆತೆನು ನಾನು
ಸಮಯ ನೋಡಿ ನೀ ಹಾಕಿದ ಟೋಪಿ
ತೆಗೆಯಲಾರದೆ ಆಗಿಹೆನು ಪಾಪಿ

------------------------------------------

ಪ್ರೀತಿಯ ಕೊಳದಲ್ಲಿ ನಾನೊಂದು ಹಂಸ
ಆಗಸದಲಿ ಹಾರುವ ಬಯಕೆಯು ಎನಗಿಲ್ಲ
ನೀರೆ ನನ್ನ ಬದುಕಿಗೆ ಆಧಾರ
ಅದು ಬರಿದಾಗದಿರಲಿ ಎಂಬುದೊಂದೇ  ಬಯಕೆ
 -------------------------------------------
ಹೊಗಳಿಕೆಗಾಗಿ ಆಡುವ ಮಾತಿಗೆ
ತೆಗಳಿಕೆಯ ಮುನ್ನುಡಿ
ತೋರಿಕೆಗಾಗಿ ನಡೆಸುವ ಜೀವನಕ್ಕೆ
ಅಸಮಾಧಾನವೇ ಕನ್ನಡಿ

No comments:

Post a Comment