Monday, January 7, 2013

ಮಾಯವಾದೆಯಾ!!


ಮನದ ಬಾಂದಳದಲ್ಲಿ ನಿನ್ನಯ ನೆನಪು
ಕರಿ ಮೋಡವಾಗಿ ಮಳೆ ಸುರಿಸುತಲಿತ್ತು
ಪ್ರೀತಿಯ ಬೀಜವು ಮೊಳಕೆಯೊಡೆಯುವ ಮೊದಲು
ನೀನೇಕೆ ಗಾಳಿಯೊಂದಿಗೆ ಮಾಯವಾದೆ?

Friday, December 14, 2012

ನಾನು


ನಾನು ನಾನು ನಾನು
ಪ್ರತಿಯೊಬ್ಬರಲ್ಲೂ ಇರುವ
ನಾನು ಮಿತ್ರನೇ? ಶತ್ರುವೇ?

ಹುಟ್ಟುವ ಮೊದಲಿಲ್ಲ
ಸತ್ತ ನಂತರವೂ ಇಲ್ಲ
ಈ ಮಧ್ಯೆ ಇರುವ ನಾನು ಯಾರು?

ಗರ್ವದ ಮೂಲ ನಾನು 
ಸಿಟ್ಟಿನ ಬೇರು ನಾನು
ಸಂಬಂಧಗಳ ಬಿರುಕಿಗೆ ಸೂತ್ರ ನಾನು 

ಕೀಳರಿಮೆಯ ಅಂಕುರ ನಾನು
ಲೋಭಕ್ಕೆ ಗೊಬ್ಬರ ನಾನು
ಸ್ವಾರ್ಥಿಯ ಗೆಳೆಯ ನಾನು

ಅಸೂಯೆಯ ಬುನಾದಿ ನಾನು
ಸಾಧನೆಗೂ ಕಾರಣ  ನಾನು
ಸುಖ ಸಂಸಾರಕ್ಕೂ ಬೇಕು ನಾನು

ನಾನು ಬಯಸಿದರೆ ಮಿತ್ರ
ಇಲ್ಲವಾದಲ್ಲಿ ಶತ್ರು 
ನಾನು ನಾವಾದರೆ ಎಲ್ಲವೂ ಹಿತ

ನಾ ಕಂಡ ಗುರು


ಸೆಳೆದ ತೀಕ್ಷ್ಣ ಕಣ್ಣುಗಳು
ನೋಡಿದೊಡನೆ ಕರಗಿದ ಮನಸು
ತ್ಯಾಜ್ಯ ವಿಸರ್ಜನೆಯಾದ
ನವೀನ ಶಕ್ತಿಯು ಪ್ರವಹಿಸಿದ ಅನುಭವ

ಮೊದಲ ನೋಟದಲ್ಲೇ ಕಾಣುವ ಪ್ರೀತಿ
ಇಮ್ಮಡಿಯಗುವ ನಂಬಿಕೆ
ಮೂಕನನ್ನಾಗಿಸುವ ಮಾತುಗಳು
ಮುದ ನೀಡುವ ಹಾವ ಭಾವ

ಹುದುಕಿದೆನು ದೇವರ 
ಸಿಗಲಿಲ್ಲ ಎಲ್ಲೆಲ್ಲೂ
ಪ್ರೀತಿಯೇ ದೇವರೆಂದು
ತೋರಿಸಿದ ಗುರುವೇ ನಿನಗೆ ಶರಣು

ಗುರುವೇ ನೀನು ತಾಯಿಯಾದರೆ  
ನಾನು ಮಗು 
ನೀನು ಪ್ರೀತಿಯಾದರೆ
ನಾನು ನಂಬಿಕೆ

ಗುರುವಿನ ಹಂಬಲ


ಬಯಸದೇ ಬರುವ
ಯೋಚನೆಗಳಿಂದ ಬೇಸತ್ತು
ಬಯಸಿಯೂ ಮಾಡಲಾಗದ
ಕಾರ್ಯಗಳಿಂದ ನೊಂದ ಜೀವನ


ಹುಚ್ಚು ಮನಸಿನ ನೀಚ
ವಿಚಾರಗಳ ಬೆನ್ನತ್ತು
ಅಂಧಕಾರದ ಕೂಪದಲ್ಲಿ
ಮುಳುಗಿದ ಜೀವನ

ಗುರುವೇ, ನನಗೆ ಬೇಡ ನಾನು
ಆದರೆ ಬೇಕು ನೀನು
ಬೆಳಕಿನಲ್ಲೂ ಕತ್ತಲೆಯ 
ಕಾಣುತ್ತಿದ್ದೇನೆ, ಮುನ್ನಡೆಸು

ನಾ ಕಣ್ಣು, ನೀ ದ್ರಷ್ಟಿಯಾಗು
ನಾ ಬಾಯಿ, ನೀ ಮಾತಾಗು
ನಾ ಕರ್ಣ, ನೀ ಶಬ್ದವಾಗು
ನಾ ಹ್ರದಯ ನೀ ಪ್ರೀತಿಯಾಗು

ಗೆಳೆಯ


ಆಡಲು ಬರುವವ
ತಿಂಡಿಯ ಕೊಡುವವ
ಬಾಲ್ಯದ ಗೆಳೆಯ


ಶಾಲೆಗಾಗಿ ಕಾಯುವವ
ಪರೀಕ್ಷೆಯಲಿ ತೋರಿಸುವವ
ಕಿಶೋರದ ಗೆಳೆಯ

ಪಾಠವ ಕಲಿಸುವವ
ಜೊತೆಯಲಿ ತಿರುಗುವವ
ಹರೆಯದ ಗೆಳೆಯ


ನಗುವನ್ನ ತರಿಸುವವ
ಕಣ್ಣೀರ ಒರೆಸುವವ
ಯೌವ್ವನದ ಗೆಳೆಯ

ಸಮಸ್ಯೆಗಳ ಪರಿಹರಿಸುವವ
ಸುಖದಲ್ಲೂ ನೆನೆಯುವವ
ಜೀವನದ ಗೆಳೆಯ

ಕಳೆದ ದಿನಗಳ ನೆನಪಿಸುವವ
ಸಾವಿನಲ್ಲೂ ಬಳಿಯಿರುವ
ವ್ರದ್ಧಾಪ್ಯದ ಗೆಳೆಯ