Saturday, April 24, 2010

ಎರಡನೇ ಮನೆ


ಅದು ಅಪರಿಚಿತವೆನಿಸಿದ್ದ ಜಾಗ 
ಎಲ್ಲರೂ ಅಪರಿಚಿತರು 
ಮನೆಗೆ ಓಡಿ ಹೋಗುವಷ್ಟು ಬೇಸರ 

ಮೊದಲು ಪರಿಚಯವಾದ ಕ್ಲಾಸ್ ಮೇಟ್ಸ 
ಆಗ ಮುಖದಲ್ಲಿ ಸ್ವಲ್ಪ ನಗು 
ಸಿಕ್ಕರಲ್ಲ ಗೆಳೆಯರು ಎನ್ನುವ ಆನಂದ 

ನಗುವಿನಿಂದ ಪ್ರಾರಂಭಗೊಂಡ ಗೆಳೆತನ 
ಒಂದೇ ಊರಿನವರೆಲ್ಲರ ಪರಿಚಯ 
ನಮ್ಮವರು ಎಂಬ ಭದ್ರತಾ ಭಾವ 

ಆಡಿದ ಕ್ರಿಕೆಟ್ ಟೂರ್ನಿ  
ಹುಚ್ಚು ಹಿಡಸಿದ ಪಾಮ್ ಟೆನ್ನಿಸ್ 
ಹರಟಿದ ವಿಚಿತ್ರ ವಿಷಯಗಳು 

ಕೂಡಿ ಓದಿದ ದಿನಗಳು 
ಗುಂಪಿನಲ್ಲಿ ನೋಡಿದ ಮ್ಯಾಚ್ಗಳು
ಜಾಗರಣೆಯ ಸವಿ ಕ್ಷಣಗಳು 

ಸ್ನಾನಕ್ಕೆ ಸಾಲಲ್ಲಿ ನಿಲ್ಲುವ ಕೆಲವರು 
ಸ್ನಾನವೇ ಮಾಡದ ಕೆಲವರು 
ಎಲ್ಲ ವಿಧದ ನಮ್ಮ ಗೆಳೆಯರು 

ಮೊದಲು ಹಿಡಿಸಿದ್ದ  ಊಟ
ಈಗ ವಾಂತಿಬರಿಸುತ್ತದೆ ಪರಿಮಳ ಕೂಡ 
ಹೋಟೆಲ್ ಅರಸಿರುವೆವು ನಾವುಗಳು 

ನೋಡಿದ ಬಗೆಬಗೆಯ ಸಿನಿಮಾಗಳು 
ಹಾಡಿದ ಅನ್ಯಭಾಷಾ ಹಾಡುಗಳು 
ಅರ್ಥ ಗೊತ್ತಿಲ್ಲದಿದ್ದರೂ ಸಂತಸ ನೀಡಿದ ಸಾಹಿತ್ಯ 

ಆಚರಿಸಿದ ವಿವಿಧ ಹಬ್ಬಗಳು,ದಿನಗಳು 
ಕೊಟ್ಟ ಬಗೆಬಗೆಯ ಪೋಸುಗಳು 
ಮುದ ನೀಡುವ ಗುಂಪಿನ ಫೋಟೋಗಳು 

ಈಗ ಎಲ್ಲರೂ ಬಂಧು-ಮಿತ್ರರು 
ಬೆಳೆದಿದೆ ನಮ್ಮ ಸಂಸಾರ 
ಇದು ನಮ್ಮ ಎರಡನೇ ಮನೆ ,ಹಾಸ್ಟೆಲ್ 

ಬಿಟ್ಟು ಹೋಗಲು ಮನಸಿಲ್ಲ 
ಆದರೆ ಬೇರೆ ದಾರಿಯಿಲ್ಲ 
ಮುಂದೆಂದೂ ಇಂಥ ಜೀವನ ಸಿಗುವುದಿಲ್ಲ 

ಹುಟ್ಟು ಎಲ್ಲಾದರೂ ಬೆಳೆ ಎಲ್ಲಾದರೂ 
ಒಮ್ಮೆ ಹಾಸ್ಟೆಲ್ ಜೀವನವ ಅನುಭವಿಸಲು ಮರೆಯದಿರು 
ಇದು ಸಂತೋಷದ ಸಾಗರ  

1 comment:

  1. ನಿನ್ನ ಹತ್ತಿರ content ಇದೆ, ಆದರೆ ಅದನ್ನು ವ್ಯಕ್ತಪಡಿಸುವ ಹಾದಿ ಇನ್ನೂ ಸಾಣೆ ಹಿಡಿಸಿಕೊಳ್ಳಬೇಕು. ಹಾಸ್ಟೆಲ್ ವಿಷಯಗಳ ಅಷ್ಟೆಲ್ಲ ವಿಷಯಗಳನ್ನು ರಸವತ್ತಾಗಿ ಪ್ರಬಂಧ ರೂಪದಲ್ಲಿಯೂ ಕೆಲವು ದೃಷ್ಟಾಂತಗಳನ್ನು ವಿವರಿಸುತ್ತಾ ಬರೆಯಬಹುದು. ಅದು ಇದಕ್ಕಿಂತಲೂ ಹೆಚ್ಚು ಆಪ್ಯಾಯಮಾನವಾಗಿ ಕಾಣುತ್ತೆ. ಅದಕ್ಕೆ ಕಥೆ ಹೇಳುವ ಚಾಕಚಕ್ಯತೆಯೂ ಮುಖ್ಯ. ನಿನಗೆ ಕಾವ್ಯಾತ್ಮಕವಾಗಿ ಅದನ್ನು ವ್ಯಕ್ತಪಡಿಸುವ ಬಯಕೆ ಇದ್ದರೂ ಕೂಡ ಭಾಷೆಯ ಬಲವಾದ ಬೆಂಬಲ ಬೇಕೇಬೇಕು ಅನ್ನೋದು ನನ್ನ ಅಭಿಪ್ರಾಯ. ಆಡುಮಾತಿನಲ್ಲೇ ಹೇಳು. ಆದರೆ ಅದರ ಸೊಗಡನ್ನು ಬಿಡಬೇಡ. ವಿಷಯಗಳು ನಿನ್ನ ಬಳಿ ಹೇರಳವಾಗಿ ಕಾದು ಕುಳಿತಿವೆ, ಅದರೆ ಅದರ ಸೂಕ್ತ ಬಳಕೆ ನಿನ್ನ ಕೈಯ್ಯಲ್ಲಿದೆ. ನಿನಗೆ ಶುಭವಾಗಲಿ.

    ReplyDelete